ಚನ್ನಬಸವಣ್ಣ, ಭಕ್ತಿಭಂಡಾರಿ ಬಸವಣ್ಣನ ಸೋದರಳಿಯ ಅಂದರೆ ಬಸವಣ್ಣನ ಅಕ್ಕ ನಾಗಲಾಂಬಿಕೆಯ ಮಗ ತಂದೆ ಶಿವದೇವ. ಶಿವದೇವನು ನಾಗಲಾಂಬಿಕೆಯ ಸೋದರಮಾವನೇ. ಆತನ ಜನ್ಮಸ್ಥಳ ಇಂಗಳೇಶ್ವರ. ನಾಗಮ್ಮ ಮತ್ತು ಶಿವದೇವ ಅವರದು ಬಾಲ್ಯವಿವಾಹ ಪದ್ಧತಿಯಡಿ ಚಿಕ್ಕವರಿರುವಾಗಲೇ ಮದುವೆಯಾಗಿತ್ತು.

ಭಕ್ತಿ ಭಾಂಡಾರಿಯೆನಿಸಿದ್ದ ಸೋದರಮಾವ ಬಸವಣ್ಣನ ಪ್ರಭಾವ ಚನ್ನಬಸವನ ಮೇಲಾಗಿದ್ದುದು ಸಹಜ. ಏಕೆಂದರೆ ಬಸವಣ್ಣನ ವಿನಯಶೀಲ ಭಕ್ತಿ, ಮನುಕುಲದ ಹಿತದ ಚಿಂತನೆಯ ಶರಣ ಜೀವನ ನಾಡಿನಲ್ಲೆಲ್ಲ ಪ್ರಖ್ಯಾತವಾಗಿತ್ತು. ಕಲ್ಯಾಣದ ಕೀರ್ತಿ ಭಾರತದ ಮುಕುಟಪ್ರಾಯವಾದ ಕಾಶ್ಮೀರ ರಾಜ್ಯಕ್ಕೂ ಮತ್ತು ಅದರ ಪಕ್ಕದ ಗಾಂಧಾರ ದೇಶಕ್ಕೂ ಹಬ್ಬಿತ್ತು. ಮೇಲಾಗಿ ಹೆತ್ತ ತಾಯಿ, ಸೋದರತ್ತೆಯರು ಮಹಾನ ಶಿವಭಕ್ತೆಯರು. ಇವರ ಒಡನಾಟದಿಂದ ಸಹಜವಾಗಿಯೇ ಜ್ಞಾನಿಯಾದನು. ಆತನು ಬೆಳೆದ ಪರಿಸರವೂ ತನ್ನ ಕೊಡುಗೆ ನೀಡಿ, ಚನ್ನಬಸವಣ್ಣ ದಿವ್ಯ ಜ್ಞಾನಿಯಾಗಲು ಅವಕಾಶ ಮಾಡಿಕೊಟ್ಟಿತು. ಚನ್ನಬಸವಣ್ಣನನ್ನು ಜ್ಞಾನದಲ್ಲಿ ಅದ್ವೀತೀಯನೆಂದೇ ಮನ್ನಿಸಲಾಗುತ್ತದೆ.

ಬಸವಣ್ಣನ ಬಗೆಗಿನ ಆತನ ಭಾವವನ್ನು, ಆತನ ಕೆಳಗಿನ ವಚನದಲ್ಲಿ ಗಮನಿಸಬಹುದು

ಮಾಂಸಪಿಂಡವೆನಿಸದೆ ಮಂತ್ರಪಿಂಡವೆನಿಸಿದನು ಬಸವಣ್ಣನು 
ವಾಯುಪ್ರಾಣಿಯೆOದೆನಿಸದೆ ಲಿಂಗಪ್ರಾಣಿಯೆOದೆನಿಸಿದಾತ ಬಸವಣ್ಣನು
ಲಿಂಗಭರಿತನೆಂಬ ಶಬ್ದಕ್ಕೆ ಅಂಗವಿಸದೆ ಶರಣುಭರಿತ ಲಿಂಗವೆಂದೆನಿಸಿದನು
ಕೂಡಲ ಚನ್ನಸಂಗನಲ್ಲಿ ಎನ್ನ ಪರಮ ಗುರು ಬಸವಣ್ಣನು.

ಈ ರೀತಿ ಬಸವಣ್ಣನು ತನ್ನನ್ನು ಹೇಗೆ ರೂಪಿಸಿದನು ಎಂಬ ಸಂಗತಿಯನ್ನು ಕೃತಜ್ಞತೆಯಿಂದ ಸ್ಮರಿಸಿರುವನು. ಇಂಥ ಮಹಾನ್ ಪುರುಷ ಚನ್ನಬಸವಣ್ಣನು “ಕೂಡಲ ಚನ್ನಸಂಗಯ್ಯನಲ್ಲಿ ಅನುಮಿಷ ಪ್ರಭುವಿಂಗೆ ಬಸವಣ್ಣ ಗುರುವಾದ ಕಾರಣ ನಾನು ನಿನಗೆ ಚಿಕ್ಕ ತಮ್ಮ, ಕೇಳಾ ಪ್ರಭುವೆ ” ಎಂದು ಪ್ರಭುದೇವರಿಗೆ ತಾರ್ಕಿಕವಾಗಿ ಹೇಳುವಷ್ಟು ಜ್ಞಾನಿಯಾದುದು ಅದ್ಭುತ.

"ಬಸವಣ್ಣ ಎಂಬಲ್ಲಿ ಎನ್ನ ಕಾಯ ಬಯಲಾಯಿತು 
ಚನ್ನಬಸವಣ್ಣ ಎಂಬಲ್ಲಿ ಎನ್ನ ಪ್ರಾಣ ಬಯಲಾಯಿತು
ಈ ಉಭಯ ಸ್ಥಳದ ಸ್ಥಾನ ನಿರ್ಣಯದ ನಿಷ್ಪತ್ತಿ
ಗುಹೇಶ್ವರಲಿಂಗ ಸಾಕ್ಷಿಯಾಗಿ ಚನ್ನಬಸವಣ್ಣನಿಂದ
ಸಾಧ್ಯವಾಯಿತು, ಕಾಣಾ ಸಂಗನ ಬಸವಣ್ಣ

ಮೇಲಿನ ವಚನದ ಮುಖಾಂತರ ಚನ್ನಬಸವಣ್ಣನ ವ್ಯಕ್ತಿತ್ವದ ಘನತೆಯನ್ನು ತೋರ್ಪಡಿಸಿದವರು ಅಲ್ಲಮ ಪ್ರಭುಗಳು.

ಶರಣರಾದ ಮಧುವಯ್ಯ-ಹರಳಯ್ಯನವರಿಗೆ ಬಿಜ್ಜಳನು ದೇಹಾಂತ ಶಿಕ್ಷೆ ನೀಡಿದ ನಂತರ, ಶರಣ ಸಾಹಿತ್ಯವನ್ನು ಸಂರಕ್ಷಿಸುವ ದೃಷ್ಟಿಯಿಂದ ಪ್ರಕ್ಷುಬ್ದವಾದ ಕಲ್ಯಾಣದಿಂದ ಹೊರ ಹೊರಟ ಶರಣರ ದಂಡಿಗೆ ಚನ್ನಬಸವಣ್ಣನೇ ನಾಯಕನಾಗಿ ಬಿಜ್ಜಳನ ಪ್ರಬಲ ಸೇನೆ ಮತ್ತು ಬಿಜ್ಜಳನ ಮಗ ಸೋಮಿದೇವರನ್ನು ಎದುರಿಸಿ, ಸೋಲಿಸುತ್ತ ಉಳವಿ ತಲುಪಿ ಅಲ್ಲಿಯೇ ಲಿಂಗೈಕ್ಯನಾದನು. ಇದರಿಂದ ಕೇವಲ ಜ್ಞಾನಬಲ ಹೊಂದಿ ಪುಸ್ತಕದ ಹುಳುವಾಗಿರದೇ, ಚನ್ನಬಸವಣ್ಣನು ವಚನ ಸಾಹಿತ್ಯದ ಸಂರಕ್ಷಣೆಗಾಗಿ, ಉದ್ದೇಶ ಈಡೇರುವವರೆಗೆ ಕಲಿತನದಿಂದ ಕಾದಿದ ಸಂಗತಿ ಹೃದಯ ತಟ್ಟುತ್ತದೆ. ಆತನ ತ್ಯಾಗದ ಪ್ರತೀಕವಾಗಿ ಕಾರವಾರ ಜಿಲ್ಲೆಯ ಉಳುವಿಯಲ್ಲಿ ಭಕ್ತರು ಚನ್ನಬಸವೇಶ್ವರ ದೇವಾಲಯ ನಿರ್ಮಿಸಿ, ಪ್ರತಿವರ್ಷ ಭಾರತ ಹುಣ್ಣಿಮೆಗೆ ಜಾತ್ರೆ ನಡೆಸುತ್ತಾರೆ.

ಚನ್ನಬಸವಣ್ಣನ ಅಂಕಿತನಾಮ “ಕೂಡಲ ಚೆನ್ನಸಂಗಯ್ಯ “

ಚನ್ನಬಸವಣ್ಣನ ಒಂದಿಷ್ಟು ವಚನಗಳು

ಕಾಮಬೇಡ ಪರಸ್ತ್ರೀಯರಲ್ಲಿ 
ಕ್ರೋಧಬೇಡ ಗುರುವಿನಲ್ಲಿ
ಲೋಭಬೇಡ ತನುಮನದಲ್ಲಿ
ಮೋಹಬೇಡ ಸಂಸಾರದಲ್ಲಿ
ಮದಬೇಡ ಶಿವಭಕ್ತರಲ್ಲಿ
ಮತ್ಸರಬೇಡ ಸಕಲ ಪ್ರಾಣಿಗಳಲ್ಲಿ
ಇಂತೀ ಷಡ್ವಿಧಗುಣವನರಿದು ಮೆರೆಯಬಲ್ಲಡೆ
ಆತನೇ ಸದ್ಭಕ್ತ ಕಾಣಾ ಕೂಡಲ ಚೆನ್ನಸಂಗಮದೇವಾ

ಅಂತರಂಗದ ಅರಿವು, ಬಹಿರಂಗದ ಕ್ರಿಯೆ 
ಈ ಉಭಯ ಸಂಪುಟ ಒಂದಾದ ಶರಣOಗೆ ಹಿಂಗಿತ್ತು ತನು ಸೂತಕ,
ಹಿಂಗಿತ್ತು ಮನ ಸೂತಕ, ಕೂಡಲಚೆನ್ನಸಂಗಯ್ಯನಲ್ಲಿ
ಸಂಗವಾದದ್ದು ಸರ್ವೇOದ್ರಿಯ
ಕಾಯ ಒಂದು, ಪ್ರಾಣ ಒಂದು, ಭಾವ ಒಂದು, 
ನಿರ್ಭಾವ ಒಂದು, ಒಂದಲ್ಲದೇ ಎರಡುOಟೆ,
ಗುರು ಒಂದು, ಲಿಂಗ ಒಂದು, ಉಪದೇಶ ಒಂದು,
ಕೂಡಲ ಚೆನ್ನಸಂಗಯ್ಯನ ಶರಣ ಬಸವಣ್ಣನ ಗರುಡಿಯಲ್ಲಿ
ಇಬ್ಬರಿಗೂ ಅಭ್ಯಾಸ ಒಂದೇ ಕಾಣಾ ಪ್ರಭುವೆ

ಸುಶಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s