Skip to content
ನನಗೆ ತಿಳಿದಷ್ಟು
Home
Category:
Uncategorized
Feb 2
ತಿಳಿ ನೀಲದಲ್ಲಿ ತಾ ಲೀನವಾಗಿ ಅವ ಹೋದ ದೂರ ದೂರಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು: ಇನ್ನೊಮ್ಮೆ ಏಕೆ ಬಾರ?ಅಂದು ಸಂಜೆ ಪ್ರಾರ್ಥನೆಗೆ ದೇವಮಂದಿರದ ದಾರಿಯಲ್ಲಿಆಚೆ ಈಚೆ ಮೊಮ್ಮಕ್ಕಳಿಬ್ಬರಲಿ ಮೈಯಭಾರ ಚೆಲ್ಲಿಜಗದ ಕರುಣೆ ನಡೆವಂತೆ ನಡೆದು ಮಂದಿರದ ಪೀಠವೇರಿನಿಂದನಲ್ಲೊ! ಜಡವುಳಿದು ಜೀವವೊಂದಾಯ್ತು ದೇವನಲ್ಲಿ.ಎಸೆದ ಗುಂಡಿಗಾ ಕುಸಿದ ದೇಹದಲಿ ವಿಮಲ ರಕ್ತ ಚೆಲ್ಲಿಮೀಯಿಸಿತ್ತು ಈ ಜಗದ ಮನವನೇ ಶೋಕ ಜಲಧಿಯಲ್ಲಿಮುಗಿದ ಕೈಯು ಮುಗಿದಂತೆ ಇತ್ತು: ನೆಲಸಿತ್ತು ಕ್ಷಮೆಯು ಮೊಗದಿಎದೆಯೊಳೆಂಥ ತಿಳಿಭಾವವಿತ್ತು! ಅದನಾವ ಬಲ್ಲ ಜಗದಿ?ಹೋದ ಹೋದನವ ತ್ಯಾಗಜೀವನದ ತುತ್ತ ತುದಿಯನೇರಿಏರಿ ಏರಿದೊಲು ಅಂತರಂಗದೈಸಿರಿಯ ಜಗಕೆ ತೂರಿಸತ್ಯ ಪ್ರೇಮಗಳ ಸತ್ವವನ್ನೆ ಕಣ್ಣೆದುರು ಎತ್ತಿ ತೋರಿಬೇರೆ ಲೋಕದನುಭಾವ ಬೀರಿ ಹೋದನಾವ ದಾರಿ?ಎನಿತು ಸರಳ ನುಡಿ, ಎಷ್ಟು ಸಹಜ ನಡೆ ಮನದ ಮಹತಿಯೇನು!ಅವನ ಎದೆಯ ಉನ್ನತಿಯ ನಿಲುಕುವುದು ಯಾವ ಗಿರಿಯ ಸಾನು?ಇಹುದೆ ಅವನ ಕರುಣೆಯನು ಧರೆಗೆ ಕರೆವಂಥ ಕಾಮಧೇನು?ಅವನು ಗೈದ ಲೀಲೆಯಲಿ ಲಯಸಿತೆಂಥವರ “ನಾನು-ನಾನು “.ತಿಳಿದಿಹುದು ಚಿತ್ತ, ಹರಿದಿಹುದು ನೋಟ ಮೇಲಕ್ಕೆ ಬಾನಿನೆಡೆಗೆಆ ಜಾಡ ಹಿಡಿದು ಇಳಿದಂತೆ ಇಹುದು ಬೆಳಕೊಂದು ಕೆಳಗೆ ಇಳೆಗೆ”ಏನಷ್ಟು ಭ್ರಾಂತಿ? ಕಾಣದೆಯೆ ಜ್ಯೋತಿ?” ಎಂಬರುಹು ಮೂಡಲೊಡನೆಬೆಳಕ ನಂಬಿ ನಿಂದಿಹನು ಧೀರ ಎದೆ ತೆರೆದು ನಾಡ ಕರೆಗೆ. ಸಾಹಿತ್ಯ: ಡಿ. ಎಸ್. ಕರ್ಕಿ(ಹಚ್ಚೇವು ಕನ್ನಡದ ದೀಪದಂತಹ ಗೀತೆಯನ್ನು ಬರೆದ ಕರ್ಕಿಯವರು ಮಹಾತ್ಮ ಗಾಂಧಿಯವರು ಹಂತಕನ ಗುಂಡಿನೇಟಿನಿಂದ ಈ ಲೋಕದಿಂದ ವಿರಮಿಸಿದ ಸಂದರ್ಭದಲ್ಲಿ ಮೂಡಿಸಿದ ಭಕ್ತಿಭಾವವಿದು).
Feb 2
ನಾನೇಕೆ ಬರೆಯುತ್ತೇನೆ
Apr 3
ಕವನ…. ಮನದ ಅಳಲು
Feb 16
ಏನೆಂದು ಕರೆಯಲಿ
Sep 3
ಮನೋನಿಯಂತ್ರಣ
Jun 17
ಟಂಕಾ….ನೆನಪು
May 28
ಗಜಲ್
Jan 17
ಕಬ್ಬಿಗ
Jan 8
ಮಂಕುತಿಮ್ಮನ ಕಗ್ಗ
Jan 1
ಸೌಂದರ್ಯ ಸೂಕ್ತ
Previous Page
Next Page
Privacy & Cookies: This site uses cookies. By continuing to use this website, you agree to their use.
To find out more, including how to control cookies, see here:
Cookie Policy
Subscribe
Subscribed
ನನಗೆ ತಿಳಿದಷ್ಟು
Sign me up
Already have a WordPress.com account?
Log in now.
ನನಗೆ ತಿಳಿದಷ್ಟು
Subscribe
Subscribed
Sign up
Log in
Report this content
View site in Reader
Manage subscriptions
Collapse this bar