Skip to content
ನನಗೆ ತಿಳಿದಷ್ಟು
Home
Category:
Uncategorized
Aug 13
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆ ಕ್ರಾಂತಿ ಗಂಗೋತ್ರಿ ಅಕ್ಕನಾಗಮ್ಮ ಬಸವ ಅಂತರಾಷ್ಟ್ರೀಯ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆಯ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸoಯುಕ್ತ ಆಶ್ರಯದಲ್ಲಿ ಡಾ. ಸಂಗಮೇಶ ಕಲಹಾಳ ಅವರ ತಾಯಿಯವರಾದ ಲಿಂ. ಪಾರ್ವತಮ್ಮ ಮಡಿವಾಳಪ್ಪ ಕಲಹಾಳ ಅವರ ಸ್ಮರಣಾರ್ಥ ಏರ್ಪಡಿಸಿದ ಶರಣ ಮಾಸದ ಮೊದಲ ದಿವಸದ ದತ್ತಿ ಉಪನ್ಯಾಸದಲ್ಲಿ ಡಾ. ಗೀತಾ ಡಿಗ್ಗೆ -ಕನ್ನಡ ಪ್ರಾಧ್ಯಾಪಕರು ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳ್ಕರ್ ಸೋಲಾಪುರ್ ವಿಶ್ವವಿದ್ಯಾಲಯ ಅವರು ಕ್ರಾಂತಿ ಗಂಗೋತ್ರಿ ಅಕ್ಕನಾಗಮ್ಮ ಅವರ ಕುರಿತು ಅತ್ಯಂತ ಸರಳವಾಗಿ ಮತ್ತು ಸಮರ್ಪಕವಾಗಿ ತಮ್ಮ ಉಪನ್ಯಾಸವನ್ನು ನಡೆಸಿಕೊಟ್ಟರು.ಅಕ್ಕನಾಗಮ್ಮ 12ನೆಯ ಶತಮಾನದ ಕನ್ನಡ ನಾಡಿನ ಶಿವಶರಣೆಯರಲ್ಲಿ ಅಗ್ರಗಣ್ಯಳು. ಕ್ರಾಂತಿ ಗಂಗೋತ್ರಿ ಎಂಬ ಅನ್ವರ್ಥನಾಮ ಪಡೆದ ದಿಟ್ಟ ಶರಣೆ. ಬಸವಣ್ಣನವರ ಸಾಧಕ ಜೀವನಕ್ಕೆ ಪೋಷಕಳಾಗಿ ನಿಂತ ಪ್ರೇರಕ ಶಕ್ತಿ. ಮಹಾಮನೆಯ ಸೂತ್ರಧಾರಿಣಿಯಾಗಿ, ಮಹಾಶಕ್ತಿಯಾಗಿ, ಅನ್ನಪೂರ್ಣೇಶ್ವರಿಯಾಗಿ ಮಹಾಮನೆ ಮತ್ತು ಅನುಭವ ಮಂಟಪದ ಜ್ಞಾನ ಮತ್ತು ಅನುಭಾವ ದಾಸೋಹದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಕ್ಕನಾಗಮ್ಮ ಬಸವಣ್ಣನವರ ಸಹೋದರಿ,ಷಟಸ್ಥಲ ಚಕ್ರವರ್ತಿ ಚೆನ್ನಬಸವಣ್ಣನವರ ತಾಯಿ, ಶಿವದೇವನ ಪತ್ನಿ.ಅಕ್ಕನಾಗಮ್ಮನಿಗೆ ನಾಗಲಾoಬಿಕೆ, ನಾಗಮ್ಮ,ನಾಗಾಯಿ, ನಾಗಾoಬಿಕೆ ಹೀಗೆ ಮುಂತಾದ ಹೆಸರುಗಳಿವೆ ಎನ್ನುವುದನ್ನು ತಿಳಿಸುತ್ತಾ ಅವರು ಬರೆದ ವಚನಗಳ ಬಗೆಗೆ ಪ್ರಸ್ತಾಪಿಸಿದರು.ಅಕ್ಕನಾಗಮ್ಮನು ಬರೆದ 15 ವಚನಗಳು ದೊರಕಿವೆ. ಅವರ ಅಂಕಿತನಾಮ “ಬಸವಣ್ಣಪ್ರಿಯ ಚೆನ್ನಸಂಗಯ್ಯ “. ಬಸವಸ್ತುತಿ, ಶರಣ ಸ್ತುತಿ ಆಧ್ಯಾತ್ಮಿಕ ರಂಗದಲ್ಲಿ ಸಾಧಿಸಿದ ನಿಲುವು ಶ್ರದ್ಧೆ ಅವರ ವಚನಗಳಲ್ಲಿ ಎದ್ದು ಕಾಣುತ್ತವೆ. ಬಸವಣ್ಣನವರಿಂದಲೇ ತಮ್ಮಬದುಕು ಸಾರ್ಥಕವಾಯಿತೆಂದು ಹೇಳುವ ಅಕ್ಕನಾಗಮ್ಮ, ಬಸವಣ್ಣನವರನ್ನು ಪುತ್ರ ವಾತ್ಸಲ್ಯದಿಂದ,ಇನ್ನೊಮ್ಮೆ ಗುರು ಮತ್ತು ಮತ್ತೊಮ್ಮೆ ತಂದೆಯ ರೂಪದಲ್ಲಿ ಕಂಡು ಸಮರ್ಪಣ ಭಾವ ವ್ಯಕ್ತಪಡಿಸಿದ್ದಾರೆ. ತಮ್ಮ ಜೀವನದಲ್ಲಿ ಬಂದ ಸುಖ ದುಃಖಗಳು ವಚನ ರೂಪದಲ್ಲಿ ಪ್ರತಿಬಿಂಬಿತವಾಗಿವೆ. ಭವ ಬಂಧನದಿಂದ ಮುಕ್ತರಾಗಲು ಭಕ್ತರಿಗೆ ಸಾಧನೆ ಅಗತ್ಯ. ಇಂತಹ ಸಾಧನೆಯಿಂದ ನಿಜವಾದ ಅರಿವು ಪಡೆದ ಅಕ್ಕ ನಾಗಮ್ಮನವರಿಗೆ ಪುಣ್ಯಪಾಪದ ಗೊಡವೆ ಇಲ್ಲ ಎಂದು ತಮ್ಮ ವಚನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಇಂತಹ ಮಾತುಗಳು ಅವರ ನಿಶ್ಚಿಂತ ನಿಲುವಿಗೆ ನಿದರ್ಶನಗಳಾಗಿವೆ. ಜನಾಪವಾದಕ್ಕೆ ಹೆದರದ ನಿಲುವು ಇನ್ನೊಂದೆಡೆ. ಇಂತಹ ಸಾಕಷ್ಟು ವಿಚಾರಗಳು ವಚನಗಳಲ್ಲಿ ಇಂಬು ಪಡೆದಿವೆ ಎಂದು ಹೇಳುತ್ತಾ ಇನ್ನೂ ಸಾಕಷ್ಟು ವಿಷಯಗಳ ಮೇಲೆ ಬೆಳಕು ಚೆಲ್ಲಿದರು. ದತ್ತಿ ದಾಸೋಹಿಗಳಾದ ಡಾ. ಸಂಗಮೇಶ್ ಕಲಹಾಳ ಅವರು ಅಕ್ಕ ನಾಗಮ್ಮನವರು ಬಸವಣ್ಣನವರಿಗಿಂತ ಒಂದು ತೂಕ ಜಾಸ್ತಿ. ಅವರದು ದಿಟ್ಟತನ ಮತ್ತು ಎದೆಗಾರಿಕೆಯಿಂದ ಕೂಡಿದ ವ್ಯಕ್ತಿತ್ವ. ಶರಣ ತತ್ವ ಪ್ರಚಾರ, ಸ್ತ್ರೀ ಸಮಾನತೆಯನ್ನು ಪ್ರಪಂಚಕ್ಕೆ ತಿಳಿಸಿಕೊಟ್ಟ ಬಸವಾದಿ ಶರಣರನ್ನು ನಾವು ಸ್ಮರಣೆ ಮಾಡಲೇಬೇಕು ಎಂದು ತಿಳಿಸಿದರು. ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆಯ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಸರ್ ಅವರು ಮಾತನಾಡುತ್ತಾ ಅಕ್ಕನಾಗಮ್ಮನಿರದಿದ್ದರೆ ವಚನ ಕ್ರಾಂತಿ ಆಗುತ್ತಿರಲಿಲ್ಲ. ಕ್ರಾಂತಿಕಾರಕ ಯೋಚನೆಗಳನ್ನು ಬಿತ್ತಿ, ಮಹಿಳೆಗೆ ನ್ಯಾಯ ಒದಗಿಸಿ ನ್ಯಾಯಪರ ಹೋರಾಟ ಮಾಡಿದ ಬಸವಣ್ಣನವರನ್ನು ನೆನೆಸಿಕೊಂಡರು. ಶರಣೆ ಏಂಜಲಿನಾ ಗ್ರೆಗರಿ ಅವರು ವಚನ ಪ್ರಾರ್ಥನೆಯನ್ನು ಸು ಶ್ರಾವ್ಯವಾಗಿ ನಡೆಸಿಕೊಟ್ಟರು. ಡಾ. ಶರಣಮ್ಮ ಗೊರೆಬಾಳ ಅವರು ಅಚ್ಚುಕಟ್ಟಾಗಿ ಸ್ವಾಗತ ಪರಿಚಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಶರಣೆ ಸುಧಾ ಪಾಟೀಲ ಅವರು ಶರಣು ಸಮರ್ಪಣೆಯನ್ನು ನಡೆಸಿಕೊಟ್ಟರು. ಶರಣೆ ಜಯಶ್ರೀ ಆಲೂರ ಅವರು ಸುಂದರವಾಗಿ ವಚನ ಮಂಗಳವನ್ನು ಹಾಡಿದರು. ಡಾ. ಶೈಲಜಾ ಪವಾಡಶೆಟ್ಟರ ಅವರು ನಿರೂಪಣೆಯನ್ನು ಮಾಡಿದರು. ಸುಧಾ ಪಾಟೀಲ ವಿಶ್ವಸ್ಥರು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ
Apr 21
ಇವಳಲ್ಲ ಹೆಣ್ಣುಇವಳಲ್ಲ ಹೆಣ್ಣುಹೆಣ್ಣು ರೂಪದ ರಕ್ಕಸಿ ಒನಪು ವಯ್ಯಾರವೇದಿಕೆಗೆ ಆಹಾರಲಕ್ಷ್ಮಣನ ನೋಟಕ್ಕೆಮೋಹಿಸಿದ ಶೂರ್ಪನಖಿನೀತಿ ನಿಯಮ ಬಿಟ್ಟುಬೆಂಬಿಡದೆ ಕಾಡಿದ ತಾಟಕಿಹೊರಗೆ ನವಿರು ಭಾವ ಒಳಗೊಳಗೆ ಕುದಿವ ವಿಷಮುಗ್ಧ ಬಾಲ ಕೃಷ್ಣನಿಗೆ ಎದೆಯುಣಿಸುವ ಪೂತನಿಅಕ್ಕ ಅಣ್ಣ ತಂಗಿ ತಮ್ಮ ಸಂಬಂಧ ಮರೆತ ಷೋಡಶಿಒಣ ಪ್ರತಿಷ್ಠೆ ಪ್ರಚಾರಕೆನಿತ್ಯ ಹಪಹಪಿಸುವ ಪಾತಕಿ ಸಿಹಿ ಹಾಲು ಮೊಸರು ಬೆಣ್ಣೆಹುಳಿಹಿಂಡುವ ತಾಟಕಿಇಂದುವಿನ ಮುಖವಾಡಹೆಗ್ಗಣದ ಗುಣ ಗೂಡುಸುಧಾ ಪಾಟೀಲ ಬೆಳಗಾವಿ
Apr 18
ಕಾವ್ಯ ಸುಧೆ
Feb 13
ನನ್ನ ಕನ್ನಡ ಕವನ -ಕೇಳಿ ಆನಂದಿಸಿ
Feb 3
ಕವನ ವಿಶ್ಲೇಷಣೆ
Feb 3
ಕವನ ವಿಶ್ಲೇಷಣೆ ; ಸಕಾರಾತ್ಮಕತೆಯ ಹೊಳಹು ಬಿಂಬಿಸುವ ಕವನ | Times of Karnataka
Nov 15
ಕಾವ್ಯ ಸುಧೆ
Apr 21
ವಚನ ವಿಶ್ಲೇಷಣೆ
Apr 20
ವಚನ ವಿಶ್ಲೇಷಣೆ
Apr 19
Next Page
Privacy & Cookies: This site uses cookies. By continuing to use this website, you agree to their use.
To find out more, including how to control cookies, see here:
Cookie Policy
Subscribe
Subscribed
ನನಗೆ ತಿಳಿದಷ್ಟು
Sign me up
Already have a WordPress.com account?
Log in now.
ನನಗೆ ತಿಳಿದಷ್ಟು
Subscribe
Subscribed
Sign up
Log in
Report this content
View site in Reader
Manage subscriptions
Collapse this bar